ಡಾ.ಎಸ್.ರಾಮಲಿಂಗೇಶ್ವರ

ಡಾ.ಎಸ್.ರಾಮಲಿಂಗೇಶ್ವರ ಅವರು ಕನ್ನಡ ಸಾಹಿತ್ಯದಲ್ಲಿ ಪ್ರಮುಖ ವ್ಯಕ್ತಿತ್ವವಾಗಿದ್ದಾರೆ. ಅವರು ತಮ್ಮ ಲೇಖನಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿಷಯಗಳನ್ನು ಚರ್ಚಿಸಿದ್ದಾರೆ.

ಅವರ ಕೃತಿಗಳು ಕನ್ನಡ ಸಾಹಿತ್ಯದಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದಿವೆ ಮತ್ತು ಅವರು ತಮ್ಮ ಶೈಲಿಯಲ್ಲಿ ವಿಶಿಷ್ಟವಾದ ದೃಷ್ಟಿಕೋಣವನ್ನು ಹೊಂದಿದ್ದಾರೆ.

ಪರಿಚಯ

ಸೇವೆ :

2004 ರಿಂದ 2008 ರವರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ 1998ರಲ್ಲಿ ಬುದ್ದ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ 4 ವರ್ಷ ಮತ್ತು ಹಾಲಿ ಕೋಶಾಧ್ಯಕ್ಷ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಎಸ್.ಎನ್.ಎಸ್.ನ ಸಂಯೋಜಕರಾಗಿ 4 ವರ್ಷ ಸೇವೆ.

ವೈಯಕ್ತಿಕ ಕೃತಿಗಳು :

ಚೈತ್ರ ಚಿತ್ರಾರ, ಪ್ರೇಮಗಂಗೆ, ಸ್ವಾತಂತ್ರ್ಯೋತ್ತರ, ತಾಯಿನಾಡು, ಸೋನೆ ಮಳೆ, ನಿನ್ನ ಪ್ರೀತಿಯ ಹಿಂದೆ, ಭೂಮಿ ತಬ್ಬಿದ ಆಕಾಶ, ಪ್ರಾಯಶ್ಚಿತ್ತ ಕಥೆ, ಕಾವ್ಯ ಸಂಕಲನ, ವಿವಿಧ ಸಾಹಿತ್ಯ ಅಭಿನಂದನಾ ಗ್ರಂಥಗಳ ಸಂಪಾದನೆ, ನೆನಪಿನ ಸಂಚಿಕೆ ಸಂಪಾದಕರಾಗಿ ಸೇವೆ.

ಸಂಘ ಪ್ರಶಸ್ತಿಗಳು :

ಕರ್ನಾಟಕ ಪ್ರಶಸ್ತಿ, ಮಯೂರವರ್ಮ ಪ್ರಶಸ್ತಿ, ಡಾ. ಹೆಚ್. ನರಸಿಂಹಯ್ಯ ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ, ಅಲ್ಲಮಪ್ರಭು ಪ್ರಶಸ್ತಿ, ಕುವೆಂಪು ಆದರ್ಶ ಶಿಕ್ಷಕ, ದಂಪತಿ ಪ್ರಶಸ್ತಿ, ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ ಇತ್ಯಾದಿ.

ಆಯೋಜಿಸಿದ ವಿವಿಧ ಕಾರ್ಯಕ್ರಮಗಳು:

ಕನ್ನಡ ಕಾವ್ಯ ಕಥಾ ಕಮ್ಮಟ, ಯುವಜನ ಮೇಳ, ಮಹಿಳಾ ಸಾಹಿತ್ಯ ಸಮಾವೇಶ, ಕನ್ನಡ ಸಾಹಿತ್ಯ ಸಂಸ್ಕೃತಿ ಸಮಾವೇಶ, ವಿವಿಧ ರತ್ನಿ ಪುಸ್ತಕ ಬಹುಮಾನ, ಸಿಡಿರೋ ಯುವ ಕಾವ್ಯ ಪ್ರಶಸ್ತಿ, ಫ್ರೆಂಡ್ಸ್ ರಾಜಕುಮಾರ್ ಕಾವ್ಯ ಪ್ರಶಸ್ತಿಗಳು, ಪುಸ್ತಕ ಪ್ರಕಾಶನ......

ಸಂಕ್ಷಿಪ್ತ ಪರಿಚಯ

ಉಪನ್ಯಾಸಕ, ಸಾಹಿತಿ ಮತ್ತು ಸಾಂಸ್ಕೃತಿಕ ಸಂಘಟಕ ಡಾ.ಎಸ್.ರಾಮಲಿಂಗೇಶ್ವರ(ಸಿಸಿರಾ) ಅವರ ಪರಿಚಯ _____________________ 1. ಹೆಸರು : ಡಾ.ಎಸ್.ರಾಮಲಿಂಗೇಶ್ವರ 2.ಕಾವ್ಯನಾಮ : ಸಿಸಿರಾ (ಸಿದ್ಧನಹಳ್ಳಿ ಸಿದ್ದೇಗೌಡ ರಾಮಲಿಂಗೇಶ್ವರ) 3. ತಂದೆ : ಸಿದ್ದೇಗೌಡ , ತಾಯಿ : ಪದ್ಮಮ್ಮ 4.ವೃತ್ತಿ : ಕನ್ನಡ ಉಪನ್ಯಾಸಕರು, ಶೇಷಾದ್ರಿಪುರಂ ಕಾಲೇಜು, ಬೆಂಗಳೂರು. 5. ಸೇವೆ :25 ವರ್ಷಗಳು 6. ಪ್ರವೃತ್ತಿ/ ಹವ್ಯಾಸಗಳು : ಕವಿತೆ, ಕತೆ, ಕಾದಂಬರಿ, ಪ್ರಬಂಧ ಬರೆಯುವುದು. ಜಾನಪದ ಗೀತೆಗಳು, ಭಾವಗೀತೆಗಳು, ವಚನಗಳು, ಕೀರ್ತನೆಗಳನ್ನು ಹಾಡುವುದು. 7.ಸಾಹಿತ್ಯ ರಚನೆ ‌: ಪ್ರಕಟಿತ ಕೃತಿಗಳು : *ಚೈತ್ರ ಚಿತ್ತಾರ *ಪ್ರೇಮಗಂಗೆ *ಸ್ವಾತಂತ್ರ್ಯಾನಂತರ *ತಾಯಿ ನಾಡು *ನಿನ್ನ ಪ್ರೀತಿಯ ಹಿಂದೆ *ಭೂಮಿ ತಬ್ಬಿದ ಆಕಾಶ ....‌ *ಜೀವನದಿ .. ಈ ಎಲ್ಲಾ ಕೃತಿಗಳು ಕವನ ಸಂಕಲನಗಳು. *ಗ್ರಾಮಾಂತರ ಜಿಲ್ಲಾ ಪ್ರಾತಿನಿಧಿಕ ಕವನ ಸಂಕಲನ( ಸಂ) *ಪ್ರಾತಿನಿಧಿಕ ಕಥಾ ಸಂಕಲನ (ಸಂ) * ಸೋನೆ ಮಳೆ (ಕಥಾಸಂಕಲನ) *ನಿನ್ನ ಪ್ರೀತಿಯ ಹಿಂದೆ (ಕಾದಂಬರಿ) 8. "ಸೃಜನಶೀಲ'__ ಸಿಸಿರಾ ಅವರನ್ನು ಕುರಿತ ಅಭಿನಂದನಾ ಗ್ರಂಥ 9.ಸಂಪಾದನ ಗ್ರಂಥಗಳು : * ಹಿರಿಯ ಸಾಹಿತಿ ಡಾ.ನಲ್ಲೂರು ಪ್ರಸಾದ್ ಅಭಿನಂದನಾ ಗ್ರಂಥ * ಪೊಲೀಸ್ ಅಧಿಕಾರಿ ಶ್ರೀ ರಾಂ.ಕೆ.ಹನುಮಂತಯ್ಯ ಅಭಿನಂದನಾ ಗ್ರಂಥ * ಕನ್ನಡ ಹೋರಾಟಗಾರ ಮಲ್ಲೇಶ್ವರಂ ನ ಹನುಮಂತರಾಯ ಅಭಿನಂದನಾ ಗ್ರಂಥ * ಪುಂಡಲೀಕ ಹಾಲಂಬಿ ಅಭಿನಂದನಾ ಗ್ರಂಥ * ಡಾ.ಬಿ.ಟಿ.ಚಿಕ್ಕಪುಟ್ಟೇಗೌಡ ಅಭಿನಂದನಾ ಗ್ರಂಥ * ಡಾ.ಕೂಡ್ಲೂರು ವೆಂಕಟಪ್ಪ ಅಭಿನಂದನಾ ಗ್ರಂಥ * ರೈತ ನಾಯಕ ಸಿ.ಪುಟ್ಟಸ್ವಾಮಿ ಅಭಿನಂದನಾ ಗ್ರಂಥ * ಹಿರಿಯ ಪತ್ರಕರ್ತ ಡಾ.ಉದಯರವಿ ಅಭಿನಂದನಾ ಗ್ರಂಥ * ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ ನೆನಪಿನ ಸಂಚಿಕೆ " ಬೊಂಬೆ ಬೀಡು 10.ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಸಂಘಟನೆಗಳಲ್ಲಿ ಸೇವೆ : * ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ನ್ನು--1998 ರಲ್ಲಿ ಸ್ಥಾಪನೆ ಮಾಡಲಾಗಿದ್ದು ಕಳೆದ 25 ವರ್ಷಗಳಿಂದ ವಿಶೇಷವಾಗಿ ಬೆಂಗಳೂರು ನಗರದಲ್ಲಿ ಅತಿಹೆಚ್ಚು ಕಾರ್ಯಕ್ರಮ ಸಂಯೋಜಿಸಲಾಗಿದ್ದು.. , ರಾಮನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಮಂಗಳೂರು ಮಂಡ್ಯ.. ಮುಂತಾದ ಕಡೆಗಳಲ್ಲಿ ಅತಿ ಹೆಚ್ಚು ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಸಾಮಾಜಿಕ ಕಾರ್ಯಕ್ರಮಗಳನ್ನು ಶಾಲಾ, ಕಾಲೇಜುಗಳಲ್ಲಿ, ಸಾರ್ವಜನಿಕ ‌ಸ್ಥಳಗಳಲ್ಲಿ ರವೀಂದ್ರ ಕಲಾಕ್ಷೇತ್ರ, ಸಂಸ ಬಯಲು ರಂಗಮಂದಿರ, ನ್ಯಾನೋ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಶೇಷಾದ್ರಿಪುರಂ ಕಾಲೇಜಿನ ಸಭಾಂಗಣ, ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿ ಭವನ, ಮಲ್ಲತ್ತಳ್ಳಿ ಕಲಾ ಸಮುಚ್ಚಯ... ಸೇರಿದಂತೆ ಹತ್ತು ಹಲವು ಸಭಾಂಗಣಗಳಲ್ಲಿ ಆಯೋಜಿಸಿ ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಕನ್ನಡ,ನಾಡು, ನುಡಿ ನೆಲ ಜಲ ಭಾಷೆ ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸಲಾಗುತ್ತಿದೆ. 11. *ಯುವ ಜನ ಸಮ್ಮೇಳನ, *ಸಾಹಿತ್ಯ ಸಾಂಸ್ಕೃತಿಕ ಸಮಾವೇಶ, *ಮಹಿಳಾ ಸಾಹಿತ್ಯ ಸಮಾವೇಶ, *ಪ್ರತಿ ವರ್ಷ ಹತ್ತು ಮಂದಿ ಲೇಖಕರಿಗೆ ಪುಸ್ತಕ ಬಹುಮಾನ ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ. *ಸರಿಸುಮಾರು 215 ಕ್ಕೂ ಹೆಚ್ಚು ಹಿರಿಯ, ಕಿರಿಯ ಲೇಖಕರುಗಳ ಕೃತಿಗಳನ್ನು ಲೋಕಾರ್ಪಣೆ ಮಾಡಿ ಪ್ರೋತ್ಸಾಹಿಸಲಾಗಿದೆ. *ನೂರಾರು ಕವಿಗೋಷ್ಠಿಗಳ ಆಯೋಜಿಸಿ ನೂರಾರು ಯುವಕವಿಗಳಿಗೆ, ಗಾಯಕರುಗಳಿಗೆ ವೇದಿಕೆ ನೀಡಿ ಬೆಳಕಿಗೆ‌ ತರಲಾಗಿದೆ. * ಸಾಹಿತ್ಯ ಸಾಮಾಜಿಕ ಸಾಂಸ್ಕೃತಿಕ, ಶೈಕ್ಷಣಿಕವಾಗಿ 625 ಕ್ಕೂ ಹೆಚ್ಚು ವಿಚಾರ ಸಂಕಿರಣ, ಉಪನ್ಯಾಸ, ಸಂವಾದ ಏರ್ಪಡಿಸಿ ಸಾಮಾಜಿಕ ಜವಾಬ್ದಾರಿ ನಿರ್ವಹಿಸಲು ಸಹಾಯ ಸಹಕಾರ ಪ್ರೋತ್ಸಾಹ ನೀಡಲಾಗಿದೆ. * ಯುವ ಬರಹಗಾರರಿಗೆ ಕಳೆದ 18 ವರ್ಷಗಳಿಂದ ಕನ್ನಡ ಕಾವ್ಯ ಕಮ್ಮಟ, ಕಥಾ ಕಮ್ಮಟ, ಕನ್ನಡ ನಾಡು ನುಡಿ ಅಭಿಮಾನ ಮೂಡಿಸುವ ಶಿಬಿರ, ಯುವಕರಿಗೆ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುವ ಕಮ್ಮಟಗಳನ್ನು ನಾಡಿನ ಅನೇಕ ಗಣ್ಯರು, ಸಾಹಿತಿಗಳು, ಸಂಸ್ಕೃತಿ ಚಿಂತಕರನ್ನು ಕರೆಸಿ ಯುವಕರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಚಿಂತನಾ ಮಂಥನದ ಬಗ್ಗೆ ಆಯೋಜಿಸಿ ಓದುವ , ಬರೆಯುವ ಕೌಶಲಗಳನ್ನು ಹೆಚ್ಚಿಸಲಾಗುತ್ತಿದೆ. * ಡಾ.ಎಲ್.ಹನುಮಂತಯ್ಯ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಪ್ರೊ.ಎಲ್.ಎನ್. ಮುಕುಂದರಾಜ್, ಡಾ.ಮನುಬಳಿಗಾರ್, ಡಾ.ಹೆಚ್.ಎಲ್.ಪುಷ್ಪಾ, ಡಾ. ವಸುಂಧರಾ ಭೂಪತಿ, ಡಾ.ಕೆ.ಆರ್.ಸಂಧ್ಯಾರೆಡ್ಡಿ, ಶ್ರೀಮತಿ ಇಂದಿರಾ ಕೃಷ್ಣಪ್ಪ, ಶ್ರೀ ನಾಗರಾಜ ಮೂರ್ತಿ, ಗೊ.ರು.ಚನ್ನಬಸಪ್ಪ, ಡಾ.ನಟರಾಜ್ ಹುಳಿಯಾರ್, ಡಾ.ಹೆಚ್.ಗೋವಿಂದಯ್ಯ, ಡಾ.ಬಂಜಗೆರೆ ಜಯಪ್ರಕಾಶ್.... ಮುಂತಾದ ಸಾಹಿತ್ಯ ಸಾಂಸ್ಕೃತಿಕ ಚಿಂತಕರನ್ನು ಕಮ್ಮಟ, ಶಿಬಿರ, ಸಮ್ಮೇಳನ, ಸಮಾವೇಶಗಳಿಗೆ ಆಹ್ವಾನಿಸಿ ಯುವಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 12.ಪತ್ರಿಕೆ ಮತ್ತು ‌ಪ್ರಕಾಶನ : ನಮ್ಮ ಜನರವಾಣಿ ಪತ್ರಿಕೆ, ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್, ಶೈಲಪ್ರಕಾಶನ, ಸಿಸಿರಾ ಪ್ರಕಾಶನದ ಮುಖೇನ ನಾಡಿನ ಸರಿಸುಮಾರು: 74 ಕ್ಕೂ ಹೆಚ್ಚು ಕೃತಿಗಳನ್ನು ನಮ್ಮ ಸಂಸ್ಥೆಯ ವತಿಯಿಂದ ಪ್ರಕಟಿಸಲಾಗಿದೆ. 13. ಸಂಘ-ಸಂಸ್ಥೆಗಳಲ್ಲಿ ಸೇವೆ : * ಅಧ್ಯಕ್ಷರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್* * ಮಾಜಿಕಾರ್ಯದರ್ಶಿ ಮತ್ತು ಹಾಲಿ ಕೋಶಾಧಿಕಾರಿ: ಗಾಂಧಿ ಶಾಂತಿ ಪ್ರತಿಷ್ಠಾನ *‌ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜಕರು : ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು * ನಿರ್ದೇಶಕ : ಕನ್ನಡ ಪ್ರೇಮಿ ಯು.ಸಿ.ಚಿಕ್ಕಣ್ಣ ಪ್ರತಿಷ್ಠಿತ *ಮಾಜಿಅಧ್ಯಕ್ಷರು: ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, *ತಾಲ್ಲೂಕು,*ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿ. 14.ಪ್ರಶಸ್ತಿ ಪುರಸ್ಕಾರ, ಗೌರವ: * ಕನ್ನಡ ಸಾಹಿತ್ಯ ಪರಿಷತ್ತಿನ ಮಯೂರವರ್ಮ ದತ್ತಿ ಪ್ರಶಸ್ತಿ * ಬಿಎಂಶ್ರೀ ಕಾವ್ಯ ಪುರಸ್ಕಾರ